ಜಿಲ್ಲಾ ಪಂಚಾಯತ್ ಯಾದಗಿರಿ

ಕರ್ನಾಟಕ ಸರ್ಕಾರ

Back
ಜಿಲ್ಲೆಯ ವಿವರ

ಭೌಗೋಳಿಕ ವೈಶಿಷ್ಟ್ಯಗಳು

ಯಾದಗಿರಿ ಜಿಲ್ಲೆಯು 5234,4 ಚದರ ಕೀ. ಮೀ ಪ್ರದೇಶವನ್ನು ಆಕ್ರಮಿಸಿದೆ. ಇದು ರಾಜ್ಯದ ಎರಡನೇ ಚಿಕ್ಕ ಜಿಲ್ಲೆಯಾಗಿದೆ. ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ 8.46% ಪ್ರತಿಶತ ಪ್ರದೇಶವನ್ನು ಒಳಗೊಂಡಿರುವ ಬೌಗೋಳಿಕ ಪ್ರದೇಶವಾಗಿದೆ. ಜಿಲ್ಲೆಯು ಒಂದು ಕಂದಾಯ ಉಪ ವಿಭಾಗದಿಂದ ಕೂಡಿರುತ್ತದೆ. ಹಾಗೂ ಜಿಲ್ಲೆಯು 3 ತಾಲ್ಲೂಕು ಮತ್ತು 3 ಶೈಕ್ಷಣಿಕ ವಲಯಗಳಿಂದ ಕೂಡಿದ್ದು, ಅವುಗಳೆಂದರೆ ಯಾದಗಿರಿ, ಶಹಾಪೂರ ಮತ್ತು ಸುರಪುರ. ಜಿಲ್ಲೆಯಲ್ಲಿ ಒಟ್ಟು 16 ಕಂದಾಯ ಹೋಬಳಿಗಳು, 1 ನಗರಸಭೆ, 3ಪುರಸಭೆ, 1 ಪಟ್ಟಣ ಪಂಚಾಯತ, 3 ತಾಲೂಕಾ ಪಂಚಾಯತ, 117 ಗ್ರಾಮ ಪಂಚಾಯತ್, 519 ಹಳ್ಳಿಗಳು ಮತ್ತು 4 ವಿಧಾನಸಭಾ ಮತಕ್ಷೇತ್ರಗಳು, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆಯ ಯಾದಗಿರಿ, ಶಹಾಪೂರ & ಸುರಪುರ ವಿಧಾನಸಭಾ ಮತಕ್ಷೇತ್ರಗಳು ರಾಯಚೂರು ಲೋಕಸಭಾ ವ್ಯಾಪ್ತಿ ಮತ್ತು ಗುರುಮಿಠಕಲ್ ವಿಧಾನಸಭಾ ಮತ ಕ್ಷೇತ್ರವು ಗುಲಬರ್ಗಾ ಲೋಕಸಭಾ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.

ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳು

ಯಾದಗಿರಿ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿರುತ್ತದೆ. ಜಿಲ್ಲೆಯಲ್ಲಿ ಪೂರ್ವ ಪರಿವರ್ತನೆ ಮತ್ತು ಈಶಾನ್ಯ ಶುಷ್ಕ ವಲಯ ಎಂದು ಎರಡು ಹವಮಾನ ವಲಯಗಳನ್ನಾಗಿ ವಿಂಗಡಿಸಲಾಗಿದೆ. ಈ ವಲಯಗಳು ಮಳೆ ಆಧಾರಿತ ಒಣ ಭೂಮಿ ಕೃಷಿ ಪ್ರದೇಶದ ಪ್ರಾಬಲ್ಯವನ್ನು ಸೂಚಿಸುತ್ತದೆ. ಜಿಲ್ಲೆಯ ಸಾಮಾನ್ಯವಾಗಿ ಮಳೆ ಪ್ರಮಾಣ 636 ಮೀ.ಮೀ ಇರುತ್ತದೆ. ಜಿಲ್ಲೆಯ ಹವಾಗುಣವು ಸಾಮಾನ್ಯವಾಗಿ ಶುಷ್ಕ ಮತ್ತು ಆರೋಗ್ಯಕರವಾಗಿದ್ದು, ಜಿಲ್ಲೆಯ ನಿವ್ವಳ ಬಿತ್ತನೆಯ ಪ್ರದೇಶ 3239,1 ಚದರ ಕಿಲೋಮೀಟರ್ ಇದ್ದು, ಇದು ಒಟ್ಟು ಕೃಷಿ ಭೂಮಿ ಪ್ರದೇಶದ ಶೇಕಡಾ 72.1 ಆಗಿದೆ. ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಬೆಳೆಗಳು, ತೊಗರಿ, ಸೂರ್ಯಕಾಂತಿ ಮತ್ತು ಕಡಲೇಕಾಯಿ ಜೋಳ ಆಗಿರುತ್ತವೆ. ಉತ್ಪಾದಕತೆ ವಿಚಾರದಲ್ಲಿ ಪ್ರಮುಖ ಬೆಳೆಗಳ ಇಳುವರಿ ರಾಜ್ಯದ ಸರಾಸರಿಗಿಂತ ಕಡಿಮೆ ಆಗಿದೆ. ಮಳೆ ಮತ್ತು ಸ್ಥಳೀಯ ಕೀಟ ದಾಳಿ ಬದಲಾವಣೆಯು ಬೇಳೆಗಳ(ತೊಗರಿ)ಉತ್ಪಾದನೆಯ ಮೇಲೆ ಪ್ರಭಾವ ಬೀರಿದೆ. ರಸಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಕ್ರಮಗಳಿಂದಾಗಿ ಜೋಳ ಉತ್ಪಾದನೆ ಮತ್ತು ಉತ್ಪಾದಕತೆ ಉತ್ತಮವಾಗಿದೆ. ತೈಲ ಬೀಜಗಳು ಪ್ರದೇಶದ ಫಲವತ್ತತೆ ಹಾಗೂ ಉತ್ಪಾದನೆಯನ್ನು ಕಡಿಮೆ ಮಾಡಿವೆ.

ವ್ಯವಸಾಯ

ಜಿಲ್ಲೆಯಲ್ಲಿ ಕೃಷಿಯೂ ಮುಖ್ಯವಾಗಿ ಮಳೆ ಮೇಲೆ ಅವಲಂಬಿತವಾಗಿದೆ.ಬಿತ್ತನೆಯ ನಿವ್ವಳ ಪ್ರದೇಶಕ್ಕೆ ನೀರಾವರಿಯೂ 14 % ರಷ್ಟು, ಇದು ರಾಜ್ಯದ ಸರಾಸರಿಗಿಂತ 24 % ಕಡಿಮೆ ಇದೆ.ಜಿಲ್ಲೆಯಲ್ಲಿ ಕೃಷ್ಣ, ಭೀಮಾ ನದಿಗಳು ಹರಿಯುತ್ತವೆ.ಜಿಲ್ಲೆಯ ಹತ್ತಿಕುಣಿ ಮತ್ತು ಸೌದಾಗರ ನಲ್ಲಿ ಮಧ್ಯಮ ನೀರಾವರಿ ಯೋಜನೆಗಲಿರು .ಜಿಲ್ಲೆಯಲ್ಲಿ 36 ಲಿಫ್ಟ್ ನೀರಾವರಿ ಯೋಜನೆಗಳು ಮತ್ತು 445 ಸಣ್ಣ ನೀರಾವರಿ ಟ್ಯಾಂಕ್ ಇವೆ.ಶಹಾಪುರ್ ಮತ್ತು ಸುರಪುರ್ ತಾಲೂಕಗಳು ಸಂಪೂರ್ಣ ನೀರಾವರಿ ಪ್ರದೇಶವಾಗಿದ್ದು ಯಾದಗಿರಿ ತಾಲೂಕು 65% ನೀರಾವರಿ ಪ್ರದೇಶವನ್ನು ಹೊಂದಿದೆ.ದನ, ಕೋಳಿ, ಕುರಿ, ಆಡುಗಳು ಮತ್ತು ಎಮ್ಮೆಗಳು ಜಿಲ್ಲೆಯ ಪ್ರಮುಖ ಜಾನುವಾರುಗಳಾಗಿವೆ.ಕೋಳಿ ಸಾಕಣೆ ಮತ್ತು ಮೇಕೆ ಪಾಲನೆ ಮಕ್ಕಳಿಗೆ ಹೆಚ್ಹಿನ ಕೆಲಸದ ಹೊರೆಯಾಗಿ ಪರಿಣಮಿಸುತ್ತಿದೆ. ಪ್ರತಿಶತ 18,73% ಪುರುಷರ ಮತ್ತು 25,86 %ಮಹಿಳೆಯರು ಕೃಷಿ ಕಾರ್ಮಿಕರಾಗಿದ್ದು ಇದು ಅವರಿಗೆ ವರ್ಷಪೂರ್ತಿ ಉದ್ಯೋಗ ಸಿಗುವುದಿಲ್ಲ. ಇದರಿಂದಾಗಿ ಸಂಪೂರ್ಣ ಕುಟುಂಬ ಸದಸ್ಯರು ಅಥವಾ ಪುರುಷ ಕಾರ್ಮಿಕರು ವರ್ಷದ ನವೆಂಬರ್ ತಿಂಗಳಲ್ಲಿ ಹೆಚ್ಚಾಗಿ ತಾತ್ಕಾಲಿಕ ವಲಸೆ ಹೋಗುವ ಪದ್ಧತಿ ಇರುತ್ತದೆ. ಇದರಿಂದಾಗಿ ಪಾಲಕರ ಜೊತೆಯಲ್ಲಿ ಮಕ್ಕಳ ಕೂಡ ವಲಸೆ ಹೋಗುವುದರಿಂದ ಮಕ್ಕಳನ್ನು ಶಾಲೆಯಲ್ಲಿ ನೊಂದಾನಿ ಮಾಡಿದರೂ ಸಹ ಅವರು ಶಾಲೆಗೆ ಹಾಜರಾಗಲು ಸಾಧ್ಯವಾಗಿರುವುದಿಲ್ಲ.

ರಸ್ತೆಗಳು

ಜಿಲ್ಲೆಯಲ್ಲಿ ರಸ್ತೆಗಳು ಸಾರಿಗೆಯ ಮೂಲ ಮಾರ್ಗವಾಗಿದ್ದು, ಜಿಲ್ಲೆಯಲ್ಲಿ ರಸ್ತೆಗಳು ಇನ್ನು ಅಭಿವೃದ್ಧಿಯ ಅಗತ್ಯವಿದೆ. ಜಿಲ್ಲೆಯಲ್ಲಿರುವ ಎಲ್ಲಾ ತರಹದ ರಸ್ತೆಗಳ ವಿವರ ಈ ಕೆಳಗಿನಂತಿದೆ:

ಕ್ರಮ.ಸಂ ವಿವರಗಳು ಕೀ.ಮೀ
1 ರಾಷ್ಟ್ರೀಯ ಹೆದ್ದಾರಿಗಳು 0
2 ರಾಜ್ಯ ಹೆದ್ದಾರಿಗಳು 476.98
3 ಪ್ರಮುಖ ಜಿಲ್ಲಾ ರಸ್ತೆಗಳು 1,396.98
4 ಹಳ್ಳಿಯ ರಸ್ತೆಗಳು 2,621
5 ಪಂಚಾಯತ್ ರಸ್ತೆಗಳು 0
6 ನೀರಾವರಿ ರಸ್ತೆಗಳು 47
7 ಪುರಸಭೆ ರಸ್ತೆಗಳು 234
8 ಇತರ ಜಿಲ್ಲಾ ರಸ್ತೆಗಳು 0
ಒಟ್ಟು 4,775.96

 
×
ABOUT DULT ORGANISATIONAL STRUCTURE PROJECTS